ಒಕ್ಕೂಟದ ಉಗಿಬಂಡಿ ಕೊಂಬೆಯ ಅರಾಯ್ಯಿಕೆಗಳನ್ನ ಇನ್ಮುಂದೆ ಕನ್ನಡದಲ್ಲಿಯೇ ಬರೆಯುವ ಏರ್ಪಾಡು ಮಾಡುವುದಾಗಿ ಆಳುಗ ವಿ. ಸೋಮಣ್ಣ ತಿಳಿಸಿದ್ದಾರೆ. ಒಕ್ಕೂಟದ ಈ ಆರಯ್ಯಿಕೆಗಳು ಇದುವರೆಗೂ ಹಿಂದಿ ಮತ್ತು ಇಂಗ್ಲಿಶ್ ನಲ್ಲಿ ಮಾತ್ರವೇ ನಡೆದುಕೊಂಡು ಬರುತ್ತಿವೆ . ಇದರಿಂದ ಕನ್ನಡ ಒಯ್ಯುಗೆಯಲ್ಲಿ ಓದಿ ಬರುವ ಕನ್ನಡಿಗ ಕೆಲಸ ಹುಡುಕುಗರಿಗೆ ಆರಯ್ಯಿಕೆ ಬರೆಯಲು ತುಂಬಾ ನುಡಿ ತೊಡಕು ಉಂಟಾಗುತ್ತಿದೆ ....
ಕರ್ನಾಟಕದಲ್ಲಿ ನೂರಾರು ಸೇರುವೆಗಳು ಇರುವುದು ಸರಿಯಶ್ಟೇ. ಆದರೆ ಇಲ್ಲಿಯೇ ಹರದು ನಡೆಸುತ್ತಾ ಇಲ್ಲಿನ ದೊರೆತಗಳನ್ನು ಚೆನ್ನಾಗಿ ಬಳಸಿಕೊಂಡು ಆಗೆ ಗಳಿಸುವ ಸೇರುವೆಗಳು ಕಡ್ಡಾಯವಾಗಿ ಕೂಡಣಕ್ಕೆ ಬಳಸಬೇಕಾದ ಸಿ.ಎಸ್.ಆರ್. (Corporate Social Responsibility (CSR)) ಕೊಡುಗೆಯ ಹಣವನ್ನು ಬೇರೆ ನಾಡುಗಳಲ್ಲಿ ಬಳಸುತ್ತಿರುವುದು ಕಂಡು ಬಂದಿದೆ ಎಂದು ಹೇಳಿರುವ ನಾಡಿನ ನಾಡಾಳ್ವ ಜೊತೆಗ ಆಗಿರುವ ಡಿ.ಕೆ. ಶಿವಕುಮಾರ್ ಅವರು...
ಎಸ್.ಬಿ.ಐ. ಮತ್ತು ಪಂಜಾಬ್ ನ್ಯಾಷನಲ್ ಹಣಮನೆಗಳಲ್ಲಿ ಕರ್ನಾಟಕ ಆಡಳಿತವು ಹೊಂದಿರುವ ಎಲ್ಲಾ ಕಡತಗಳನ್ನು ಕೊನೆಗೊಳಿಸಲು ನಾಡಾಳಿತ ಅಪ್ಪಣೆ ನೀಡಿರುವುದಾಗಿ ವರದಿಯಾದೆ. ಇತ್ತೀಚಿಗಶ್ಟೇ ಈ ಹಣಮನೆಗಳಲ್ಲಿ ತಪ್ಪೆಸಕ ನಡೆದಿರುವ ಬಗ್ಗೆ ಸುದ್ದಿಯಾಗಿತ್ತು. ಆಡಳಿತದ ಅರಿವಿಗೆ ಬಾರದೆ ಕೆಲವು ಆಳ್ಮೆಯಾಳುಗಳು ಆಡಳಿತದ ದುಡ್ಡನ್ನು ಕೆಟ್ಟಬಳಕೆ ಮಾಡಿಕೊಂಡಿದ್ದರು. ಇದರಿಂದಾಗಿ ನಾಡಳಿತವು ಒಕ್ಕೂಟದೆಲ್ಲೆಡೆ ಮುಜುಗರ ಪಡುವಂತಾಗಿತ್ತು . ಇದನ್ನು ಸರಿಪಡಿಸಿಕೊಳ್ಳಲೋಸುಗ ಇದೀಗ ದೊಡ್ಡ...