ಕರ್ನಾಟಕದಲ್ಲಿ ನೂರಾರು ಸೇರುವೆಗಳು ಇರುವುದು ಸರಿಯಶ್ಟೇ. ಆದರೆ ಇಲ್ಲಿಯೇ ಹರದು ನಡೆಸುತ್ತಾ ಇಲ್ಲಿನ ದೊರೆತಗಳನ್ನು ಚೆನ್ನಾಗಿ ಬಳಸಿಕೊಂಡು ಆಗೆ ಗಳಿಸುವ ಸೇರುವೆಗಳು ಕಡ್ಡಾಯವಾಗಿ ಕೂಡಣಕ್ಕೆ ಬಳಸಬೇಕಾದ ಸಿ.ಎಸ್.ಆರ್. (Corporate Social Responsibility (CSR)) ಕೊಡುಗೆಯ ಹಣವನ್ನು ಬೇರೆ ನಾಡುಗಳಲ್ಲಿ ಬಳಸುತ್ತಿರುವುದು ಕಂಡು ಬಂದಿದೆ ಎಂದು ಹೇಳಿರುವ ನಾಡಿನ ನಾಡಾಳ್ವ ಜೊತೆಗ ಆಗಿರುವ ಡಿ.ಕೆ. ಶಿವಕುಮಾರ್ ಅವರು ಆ ಹಣವನ್ನು ಕರ್ನಾಟ್ಯಾಕ್ಡ್ಯಾ ಒಳಗೇ ಬಳಸಬೇಕು ಎಂದು ಕಟು ಹೇಳಿಕೆ ನೀಡಿದ್ದಾರೆ. ನಮ್ಮ ನಾಡಿನಲ್ಲಿ ೪೩ ಸೇರುವೆಗಳು ೪ ಲಕ್ಷ ಕೋಟಿಗೂ ಹೆಚ್ಚಿನ ಆಗೆಯಲ್ಲಿ ಇವೆಯಂತೆ. ಅವು ೮,೦೬೩ ಕೋಟಿ ಸಿ.ಎಸ್.ಆರ್. ದೇಣಿಗೆಯನ್ನು ಕೊಡುತ್ತಿವೆಯಂತೆ .
ನಮ್ಮ ನಾಡಿನಲ್ಲಿ ಸುಮಾರು ಇಪ್ಪತ್ತು ನೂರು ಕಲಿಕೆಮನೆಗಳು ತುಂಬಾ ಕಳಪೆ ಮಟ್ಟದಲ್ಲಿ ಇದ್ದು ಅವುಗಳನ್ನು ಇಲ್ಲಿ ಆಗೆ ಗಳಿಸುತ್ತಿರುವ ಸೇರುವೆಗಳು ಮುಂದಾಗಿ ತಮ್ಮಿಂದ ಆಗುವಶ್ಟು ಕಲಿಕೆಮನೆಗಳನ್ನು ಮೇಲ್ಮಟ್ಟಕ್ಕೆ ಏರಿಸಬೇಕು. ಈ ಕೆಲಸವನ್ನು ಅವರು ಮಡಿದ ಬಳಿಕ ಅದರ ಬಗ್ಗೆ ತಿಳಿವುತೋರುಕವನ್ನು ಆ ಕಲಿಕೆಮನೆಗಳ ಎದುರು ತಮ್ಮ ಸೇರುವೆಯ ಬಯಲರಿಕೆ ಮೂಲಕ ಹಾಕಿಕೊಳ್ಳಬಹುದು ಎಂದು ಡಿಕೆಶಿ ಹೇಳಿದ್ದಾರೆ. ಕೂಡಣಕೂಟಕ್ಕೆ ಸೇರುವೆಗಳು ನೀಡಬೇಕಾಗಿರುವ ಹಣವನ್ನು ಆಡಳಿತಕ್ಕೆ ನೀಡುವುದೇ ಬೇಡ, ಮಾರಾಗಿ ಆಯಾ ಸೇರುವೆಗಳೇ ಮುಂದಾಗಿ ಒಳ್ಳೆಯ ಕೆಲಸ ಮಾಡಲಿ ಎಂಬುದು ಅವರ ಕೋರಿಕೆಯಾಗಿದೆ. ನಿನ್ನೆ ವಿಧಾನಸೌಧದ ಜಗುಲಿಯಲ್ಲಿ ನಡೆದ ಕಲಿಕೆಯಾಡಳಿತದವರು ನಡೆಸಿಕೊಟ್ಟ ಸೇರುವೆ ಮಂದಿಯೊಂದಿಗಿನ ಮಾತುಕತೆ ಹೊತ್ತಿನಲ್ಲಿ ಡಿಕೆಶಿ ಈ ಕುರಿಪನ್ನು ಒತ್ತಿ ಹೇಳಿದರು .
ಸೇರುವೆಗಳ ಸಿ.ಎಸ್.ಆರ್. ಹಣವು ಹಳ್ಳಿಗಳ ಅದರಲ್ಲೂ ಕಲ್ಯಾಣ ಕರ್ನಾಟಕ ಕಡೆಯ ಕಲಿಕೆ ಮನೆಗಳ ಏಳಿಗೆಗೆ ತೊಡಗಿಸಿಕೊಳ್ಳುವ ಬೇಕಾಗಿಕೆ ಇದೆ. ಇದಕ್ಕಾಗಿ ಕರ್ನಾಟಕ ಕಲಿಕೆಯಾಡಳಿತವು 'ಸಮತ್ವ' ಎಂಬ ಸಂಸ್ಕೃತದ ಹೆಸರಿನ ಕೆಲಸದೇರ್ಪಾಡು ಮಾಡಿದೆ. ಈ ಏರ್ಪಾಡಿನಂತೆ ಸುಮಾರು ಇಪ್ಪತ್ತು ನೂರು ಕಲಿಕೆಮನೆಗಳಿಗೆ ಬೇರುಮಟ್ಟದ ಬೇಡಿಕೆಗಳು ಇವೆ. ಅಂತಹ ಬೇಡಿಕೆಗಳನ್ನು ಸೇರುವೆಗಳೇ ಒದಗಿಸಲಿ . ಇದಕ್ಕೆ ಬೇಕಾದ ಒದವಿ ಮತ್ತು ಒತ್ತಾಸೆಯನ್ನು ಆಡಳಿತವು ನೀಡಲಿದೆ ಎಂದಿದ್ದಾರೆ.