ಒಕ್ಕೂಟದ ಉಗಿಬಂಡಿ ಕೊಂಬೆಯ ಆರಯ್ಯಿಕೆ ಇನ್ಮುಂದೆ ಕನ್ನಡದಲ್ಲಿಯೇ ಬರೆಯಬಹುದು


೦೩ ಮೊಚ್ಚಳಿ ೨೦೨೪, ೦೬:೫೨ ಇಳಿಹೊತ್ತು, 903 ಓದು

ಒಕ್ಕೂಟದ ಉಗಿಬಂಡಿ ಕೊಂಬೆಯ ಅರಾಯ್ಯಿಕೆಗಳನ್ನ ಇನ್ಮುಂದೆ ಕನ್ನಡದಲ್ಲಿಯೇ ಬರೆಯುವ ಏರ್ಪಾಡು ಮಾಡುವುದಾಗಿ ಆಳುಗ ವಿ. ಸೋಮಣ್ಣ ತಿಳಿಸಿದ್ದಾರೆ. ಒಕ್ಕೂಟದ ಈ ಆರಯ್ಯಿಕೆಗಳು ಇದುವರೆಗೂ ಹಿಂದಿ ಮತ್ತು ಇಂಗ್ಲಿಶ್ ನಲ್ಲಿ ಮಾತ್ರವೇ ನಡೆದುಕೊಂಡು ಬರುತ್ತಿವೆ .  ಇದರಿಂದ ಕನ್ನಡ ಒಯ್ಯುಗೆಯಲ್ಲಿ ಓದಿ ಬರುವ ಕನ್ನಡಿಗ ಕೆಲಸ ಹುಡುಕುಗರಿಗೆ ಆರಯ್ಯಿಕೆ ಬರೆಯಲು ತುಂಬಾ ನುಡಿ ತೊಡಕು ಉಂಟಾಗುತ್ತಿದೆ . ಈ ತೊಡಕನ್ನು ಇದುವರೆಗೂ ಯಾವುದೇ ಆಳುಗರು ಕೂಡ ಸರಿಪಡಿಸಲು ಮುಂದಾಗಿರಲಿಲ್ಲ .  ಆದರೆ ಈ ಬಾರಿ ಕರ್ನಾಟಕದಿಂದ ಒಕ್ಕೂಟದ ಉಗಿಬಂಡಿ ಕೊಂಬೆಯ ಆಳುಗರಾಗಿರುವ ವಿ .  ಸೋಮಣ್ಣ ಅವರು ಇದನ್ನು ಸರಿ ಪಡಿಸಿ ಕನ್ನಡದಲ್ಲಿಯೇ ಆರಯ್ಯಿಕೆ ಬರೆಯಲು ಅನುವು ಮಾಡಿ ಕೊಡಲು ಹೊರಟಿರುವುದು ಕನ್ನಡಿಗರಿಗೆ ನಲಿವು ತಂದಿದೆ . 

 ವಿ .  ಸೋಮಣ್ಣ ಅವರು ಆಳುಗರಾದ ಬಳಿಕ ಕನ್ನಡದ ಬಗ್ಗೆ ಹೆಚ್ಚಿನ ಒಲವು ತೋರುತ್ತಿದ್ದು ಕೆಲವು ನಾಳುಗಳ ಹಿಂದೆ ಹಿಂದಿಯ ಊಳಿಗರೊಬ್ಬರಿಗೆ  ಕೆಲಸಕ್ಕಾಗಿ ಕನ್ನಡ ನಾಡಿಗೆ ಬಂಡ ಬಳಿಕ ಕಡ್ಡಾಯವಾಗಿ ಕನ್ನಡವನ್ನು ಕಲಿಯಲೇ ಬೇಕು ಎಂದು ಗದರಿದ್ದರು.

ಹಾಗೆಯೆ ಆರಯ್ಯಿಕೆ ಕೇಳ್ವಿ ಹಾಳೆಗಳನ್ನು ಹೇಗೆ ಉಂಟುಮಾಡುತ್ತಾರೆ ಎಂಬುದು ಕೂಡ ಎದುರು ನೋಡಬೇಕಾದ ಕುರಿಪಾಗಿದೆ .  ಏಕೆಂದರೆ ಕೆಲವು ನಾಳುಗಳ ಹಿಂದೆ ನಡೆದ ಕೆ . ಪಿ . ಎಸ್ .ಸಿ . ಆರಾಯ್ಯಿಕೆಯಾ ಸುದ್ದಿ ಹಾಳೆಗಳು ಗೊಂದಲದಿಂದ ಕೂಡಿದ್ದು ಬರೆಯಲು ಬಂದವರು ಕಂಗಾಲಾಗಿದ್ದು ನಡೆದಿತ್ತು. ಅದರ ಸುದ್ದಿಯನ್ನು ನಾವು   "ಕೆಪಿಎಸ್ಸಿ ಆರಯ್ಯಿಕೆಯ ಕನ್ನಡ ಕೇಳ್ವಿ ಹಾಳೆಗಳಲ್ಲಿ ಯಕ್ಕಸಕ್ಕ ತಪ್ಪುಗಳು! " ಎಂಬ ತಲೆಬರಹದಲ್ಲಿ ಅಚ್ಚಿಸಿದ್ದೆವು. ಆದರೆ ಈ ಬಾರಿ ಹಾಗೆ ಆಗದಂತೆಯೂ ಸೋಮಣ್ಣನವರೇ ನೋಡಿಕೊಳ್ಳಬೇಕು ಅನ್ನುವುದು ನಮ್ಮ ಬಯಕೆಯಾಗಿದೆ .    

ಹಂಚಿರಿ: