ನಮ್ಮ ನೆಲವನ್ನು ನಾಲ್ಕರಲ್ಲಿ ಮೂರು ಪಾಲು ನೀರು ಸುತ್ತುವರೆದಿರುವುದು ನಮಗೆಲ್ಲ ತಿಳಿದಿರುವುದೇ ಆಗಿದೆ. ನಮ್ಮ ನೆಲವನ್ನು ಹೊರತುಪಡಿಸಿ ಬೇರೆ ಎಲ್ಲಾದರೂ ನೀರು ಇರುವುದೇ ಎಂಬುದನ್ನು ಅರಿಮೆಗಾರರು ತುಂಬಾ ನಾಳುಗಳಿಂದ ಹುಡುಕುತ್ತಲೇ ಇದ್ದಾರೆ. ಮೊದಲಿಗೆ ತಿಂಗಳದ ಮೇಲೆ ನೀರು ಇದೆಯೇ ಎಂಬುದನ್ನು ಕಂಡುಕೊಳ್ಳಲು ತುಂಬಾ ಪಡಿಪಾಟಲನ್ನು ಪಟ್ಟಿದ್ದರು. ಎಶ್ಟೋ ಮೊಗಸುಗಳ ಹೊರತಾಗಿಯೂ ತಿಂಗಳನ ಮೇಲೆ ಹೆಚ್ಚಿನ ಮೊತ್ತದ ನೀರು ಇರುವುದಕ್ಕೆ ಯಾವುದೇ ಇಂಬುಗಳು ತೊರೆಯಲಿಲ್ಲ. ಅದಾದ ಬಳಿಕ ಅರಿಮೆಗಾರರ ನೋಟ ತಿಂಗಳಿನಿಂದ ಕೆನ್ನೆಲದತ್ತ ಹೊರಳಿತ್ತು.
ಅಮೆರಿಕ, ರಷ್ಯಾ, ಚೀನಾ, ಯುರೋಪ್ ಗಳಶ್ಟೇ ಅಲ್ಲದೆ ನಮ್ಮ ಒಕ್ಕೂಟವೂ ಕೂಡ ಕೆನ್ನೆಲದ ಮೇಲೆ ತಮ್ಮ ಆರಯ್ಯಿಕೆಯನ್ನು ಕೈಗೊಂಡಿದ್ದವು. ಇವುಗಳಲ್ಲಿ ಅಮೆರಿಕದ ನಾಸಾ ಸೇರುವೆಯು ತುಂಬಾ ಇತ್ತೀಚಿನ ಸಲಕರಣೆಗಳೊಂದಿಗೆ ಆರಯ್ಯಿಕೆಯಲ್ಲಿ ತೊಡಗಿತ್ತು. ನಾಸಾ ವು ಕ್ಯೂರಿಯಾಸಿಟಿ ರೋವರ್ ಎಂಬ ಎರಡು ಬೆಣಿಗೆಗಳನ್ನು ಕೆನ್ನೆಲದ ಮೇಲೆ ಇಳಿಸಿ ಸುತ್ತಾಡಿಸುವ ಮೂಲಕ ಅಲ್ಲಿ ಬಗೆ ಬಗೆಯ ತಿಳುವುಗಳನ್ನು ಪಡೆದುಕೊಳ್ಳುವ ಕೆಲಸದಲ್ಲಿ ತೊಡಗಿತ್ತು. ಈ ಹಿಂದೆಯೇ ಕೆನ್ನೆಲದ ಮೇಲೆ ಎಷ್ಟು ನೂರೇಡುಗಳ ಹಿಂದೆಯೇ ಅಲ್ಲಿ ನೀರು ಇತ್ತು ಎಂಬ ಸುಳಿವನ್ನು ಪಡೆದುಕೊಂಡಿತ್ತು.
ಇದೀಗ ಬಂದಿರುವ ಹೊಸ ಸುದ್ದಿ ಏನೆಂದರೆ ಕೆನ್ನೆಲದಲ್ಲಿ ಹೆಚ್ಚಿನ ಮೊತ್ತದ ನೀರು ಇದೆ ಎಂಬುದಕ್ಕೆ ಸರಿಯಾದ ಸೆಲೆ ದೊರೆತಿದೆ ಎಂದು ನಾಸಾವು ಹೇಳಿಕೊಂಡಿದೆ. ಕೆನ್ನೆಲದ ಮೇಲೆ ಇರುವ ನೀರು ಅದರ ನೆಲದಡಿಯಲ್ಲಿ ಹುದುಗಿದ್ದು ಮೇಲ್ಮೈನಿಂದ ಸುಮಾರು ಒಂದು ಮೈಲಿ ಆಳದವರೆಗೆ ಅಡಕಗೊಂಡಿದೆ ಎಂಬುದಾಗಿ ನಾಸಾವು ತಿಳಿಸಿದೆ. ಇಶ್ಟು ಮತ್ತದ ನೀರು ಇರುವಿಕೆಯು ದಿಟವಾದರೆ ಮುಂಬರುವ ನಾಳುಗಳಲ್ಲಿ ಕೆನ್ನೆಲದ ಮೇಲೆ ಆಳುಗಳು ಹೋಗಿ ನೆಲೆ ನಿಲ್ಲುವ ಅನುವು ಹೆಚ್ಚಾಗಲಿದೆ.