ಕೆಪಿಎಸ್ಸಿ ಆರಯ್ಯಿಕೆಯ ಕನ್ನಡ ಕೇಳ್ವಿ ಹಾಳೆಗಳಲ್ಲಿ ಯಕ್ಕಸಕ್ಕ ತಪ್ಪುಗಳು!


೩೦ ಮುಮ್ಮಳೆ ೨೦೨೪, ೦೨:೦೦ ಇಳಿಹೊತ್ತು, 565 ಓದು

ಕಳೆದ ಏಳ್ನಾಳು ನಡೆದ ಕೆಪಿಎಸ್ಸಿ ಆರಯ್ಯಿಕೆಯ ಕನ್ನಡ ಕೇಳ್ವಿಹಾಳೆಗಳಲ್ಲಿ ಎಲ್ಲೆ ಮೀರಿದ ತಪ್ಪುಗಳು ನುಸುಳಿದ್ದು ಆರಯ್ಯಿಕೆ ಬರೆಯಲು ಹೋದ ಹುರಿಯಾಳುಗಳು ಕಂಗಾಲಾಗಿರುವ ಆಗುಹ ವರದಿಯಾಗಿದೆ. ಕನ್ನಡದಲ್ಲಿ ಕೇಳಲಾದ ಕೇಳ್ವಿಗಳು ತಪ್ಪು ತಪ್ಪಾಗಿ ಅಚ್ಚಾಗಿದ್ದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಅಂಗಳದಲ್ಲಿ ಕೇಳ್ವಿಯು ಒಂದು ಹುರುಳಲ್ಲಿ ಇದ್ದಾರೆ, ಅದೇ ಕೇಳ್ವಿ ಕನ್ನಡದಲ್ಲಿ ಬೇರೆಯ ಬಗೆಯಲ್ಲಿ ಕೊಡಲಾಗಿದೆ. ಕೆಲವು ಕೇಳ್ವಿಗಳು ಒಂದಕ್ಕೊಂದು (ಕನ್ನಡ ಮತ್ತು ಆಂಗ್ಲ) ಎದಿರು ಬದುರು ಮಾಡಲಾಗಿದೆ. ಎತ್ತುಗೆಗೆ ಕನ್ನಡದಲ್ಲಿ ಒಂದು ಕೇಳ್ವಿಗೆ ಸರಿ ಮಾರ್ನುಡಿ "ಹೌದು" ಎಂದಾಗಿದ್ದರೆ, ಅದೇ ಕೇಳ್ವಿಗೆ ಆಂಗ್ಲದಲ್ಲಿ ಸರಿ ಮಾರ್ನುಡಿ no ಎಂದಾಗಿದೆ. ಇದರಿಂದಾಗಿ ಆರಯ್ಯಕೆ ನಡೆದಿರುವುದು ತಪ್ಪಾಗಿದೆ, ಅದನ್ನು ಮತ್ತೆ ಮರು ಅರಯ್ಯಿಕೆ ನಡೆಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ. ನಾಗತಿಹಳ್ಳಿ ಚನ್ದ್ರಶೇಕರ್, ಪುರುಷೋತ್ತಮ ಬಿಳಿಮಲೆ ಮೊದಲಾದವರು ಕಟುವಾಗಿ ಎದುರಿಕೆ ತಿಳಿಸಿದ್ದಾರೆ . ಮತ್ತು ಈ ಆರಯ್ಯಿಕೆಯನ್ನು ಮತ್ತೆ ನಡೆಸುವಂತೆ ಒತ್ತಾಯಿಸಿದ್ದಾರೆ .

ಮರು ಆರಯ್ಯಿಕೇ ನಡೆಸುವಂತೆ ಕನ್ನಡ ಏಳಿಗೆ ಪ್ರಾಧಿಕಾರದ ಮುಂದಾಳು ಬಿಳಿಮಲೆ ಒತ್ತಾಯ.

ತಪ್ಪು ತಪ್ಪಾಗಿ ಕೇಳ್ವಿಹಾಳೆ ಉಂಟಾಗಿಸಿ ಕನ್ನಡದ ಹುರಿಯಾಳುಗಳಿಗೆ ತೊಂದರೆ ಉಂಟು ಮಾಡಿದ ಕೆಪಿಎಸ್ಸಿ ಆರಾಯ್ಕೆ ಎನ್ನು ಮತ್ತೊಮ್ಮೆ ನಡೆಸುವಂತೆ 

ಹಂಚಿರಿ: