ತುಂಗಬದ್ರಾ ಅಣೆಕಟ್ಟೆಯ ಮುರಿದ ಬಾಗಿಲು ಸರಿಪಡಿಸಿಕೆ


೧೯ ಮುಮ್ಮಳೆ ೨೦೨೪, ೦೮:೪೨ ಇಳಿಹೊತ್ತು, 134 ಓದು

ತುಂಗಬದ್ರಾ ಅಣೆಕಟ್ಟೆಯ ಮುರಿದ ಬಾಗಿಲು ಸರಿಪಡಿಸಿಕೆ ಕೆಲಸ ಮುಗಿದಿರುವ ಬಗ್ಗೆ ವರದಿಯಾಗಿದೆ .  ಎರಡು ನಾಳುಗಳ ಹಿಂದೆಯೇ ಮುರಿದ ಬಾಗಿಲಿಗೆ  ಹೊಸ ಕದವನ್ನು ತಂದು ಜೋಡಿಸಲಾಗಿದ್ದು ಎರಡೇ ನಾಳುಗಳಲ್ಲಿ ನಾಲ್ಕು ಟಿಎಂಸಿ ನೀರು ಅಣೆಕಟ್ಟೆಯಲ್ಲಿ ಹೆಚ್ಚಾಗಿರುವ ಬಗ್ಗೆ ಆಳ್ಮೆಗಾರರು ತಿಳಿಸಿದ್ದಾರೆ .  ಸಿಹಿಮೊಗೆ, ಚಿಕ್ಕಮಗಳೂರು ಕಡೆ ಮಳೆ ಚೆನ್ನಾಗಿ ಆಗುತ್ತಿರುವುದರಿಂದಾಗಿ ಟಿಬಿ ಅಣೆಕಟ್ಟೆಗೆ ಒಳ ಹರಿವು ಹೆಚ್ಚಾಗಿಯೇ ಇದೆ .  ಇದೆ ಬಗೆಯಲ್ಲಿ ಒಳಹರಿವು ಮುಂದುವರಿದರೆ ಬಾಗಿಲು ಮುರಿದ ಸಲುವಾಗಿ ಹೊರಗೆ ಬಿಡಲಾಗಿದ್ದ ನೀರು ಮರುತುಂಬಿಸಿಕೆಗೊಳ್ಳುವ ಮೂಲಕ ಅಣೆಕಟ್ಟೆ ಮತ್ತೆ ತುಂಬುವ ನಂಬಿಕೆ ಮಂದಿಯಲ್ಲಿ ಇದೆ . 

ಕಳೆದ ಕಾಡುನಾಳಿನಂದು ಮುರಿದ ಬಾಗಿಲಿಗೆ ಹೊಸ ಕಾದ ಜೋಡಿಸುವ ಕೆಲಸ ಮುಗಿದಿತ್ತು .  ಅಂದಿಗೆ ಅಣೆಕಟ್ಟೆಯಲ್ಲಿ ೭೧ ಟಿಎಂಸಿ ನೀರು ಕೂಡಿಕೊಂಡಿತ್ತು . ಆದರೆ ಇಂದಿನ ನೀರಿನ ಕುಡಿಕೆ ಸುಮಾರು ೭೫ ಟಿಎಂಸಿ ಎಂಬುದಾಗಿ ತಿಳಿದು ಬಂದಿದೆ. ನೀರಿನ ಒಳ ಹರಿವು ಇಂದು ೪೫,೦೦೦ ಕ್ಯೂಸೆಕ್ ಇದೆ ಎಂಬುದಾಗಿ ತಿಳಿದು ಬಂದಿದೆ. ಅಂದರೆ ಸುಮಾರು ೪ ಟಿಎಂಸಿ ಒಳ ಹರಿವು ಇದ್ದರೆ, ೨  ಟಿಎಂಸಿ ಮಾತ್ರ ಹೊರ ಹರಿವು ಇರುವುದಾಗಿ ತಿಳಿದು ಬಂದಿದೆ. ಇದೇ ಬಗೆಯಲ್ಲಿ ಮಳೆ ಮತ್ತು ಒಳಹರಿವು ಮುಂದುವರಿದರೆ ಇನ್ನು ೧೧ ನಾಳುಗಳಲ್ಲಿಯೇ ಟಿಬಿ ಆಣೆಕಟ್ಟು ತುಂಬಲಿದೆ. 

ಈ ತಿಂಗಳು (ಮುಮ್ಮಳೆ/ಆಗಸ್ಟ್) ನಲ್ಲಿ ಮಾತ್ರ ಚೆನ್ನಾಗಿ ಮಳೆಯಾಗುತ್ತದೆ .  ಆಮೇಲೆ ಮುಂದಿನ ತಿಂಗಳು (ನಾಲ್ಮಳೆ/ಸೆಪ್ಟೆಂಬರ್) ಅಶ್ಟಾಗಿ ಮಳೆಯಾಗಲಾರದು. ಆಮೇಲೆ ಹಿಂಗಾರು ಮಳೆಗೆ ಕಾಯಬೇಕಾಗುತ್ತದೆ ಎಂಬುದು ತಿಳಿದವರ ಮಾತಾಗಿದೆ .        

ಹಂಚಿರಿ: