ತುಂಬಾ ಏಡುಗಳಿಂದಲೂ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯು ನಡೆದುಕೊಂಡೆ ಬಂದಿದೆ. ಅದರಲ್ಲಿ ಕರ್ನಾಟಕದಲ್ಲಿ ಕಲಿಕೆಯಲ್ಲೂ ಹಿಂದಿಯನ್ನು ತಂದು ಮಕ್ಕಳಿಗೆ ಹೆಚ್ಚಿನ ಹೊರೆಯನ್ನು ಹೊರಿಸಲಾಗಿದೆ. ಆದರೆ ಕನ್ನಡಿಗರೇನೂ ಸುಮ್ಮನೆ ಕುಳಿತಿಲ್ಲ. ಅಂದಿನಿಂದಲೂ ಕಲಿಕೆಯಲ್ಲಿ ಮೂರ್ನುಡಿ ಕಲಿಕೆಯನ್ನು ತೊಲಗಿಸಿ, ಎರಡೇ ನುಡಿ ಕಲಿಕೆಯನ್ನು ಒದಗಿಸಬೇಕು ಎಂಬ ಬೇಡಿಕೆಯನ್ನು ಆಡಳಿತದ ಎದಿರು ಇಡುತ್ತಲೇ ಬಂದಿದ್ದಾರೆ. ಆದರೆ ಇದುವರೆಗೂ ಯಾವುದೇ ನಾಡಾಳಿತವೂ ಇದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಕನ್ನಡಿಗರ ಎದಿರಿಕೆಯು ನಾಳಿಂದ ನಾಳಿಗೆ ಹೆಚ್ಕುತ್ತಲೇ ಹೋಗಿದೆ.
ಮೂರ್ನುಡಿ ಕಲಿಕೆಬೇಡವೆಂದು ೫೦,೦೦೦ ಮಂದಿ ಒಪ್ಪ ಹಾಕಿದರು.
ಕಲಿಕೆಯಲ್ಲಿ ಮೂರು ನುಡಿ ಬೇಡವೇ ಬೇಡವೆಂದು 'ನಮ್ಮ ನಾಡು, ನಮ್ಮ ಆಳ್ವಿಕೆ' ತಂಡದವರು ತೊಡಗಿಸಿದ ಒಪ್ಪ ತೊಡಗಿಕೆಯಲ್ಲಿ ೫೦ ಹನ್ನೂರಕ್ಕೂ ಹೆಚ್ಚು ಮಂದಿ ಒಪ್ಪ ಹಾಕಿದ್ದಾರೆ. ಅದನ್ನು ತಂಡದವರು ಈಗಾಗಲೇ ನಾಡಿನ ಮುಂದಾಳು ಸಿದ್ದರಾಮಯ್ಯ ಅವರಿಗೂ ನೀಡಿದ್ದಾರೆ. ಹಾಗೆಯೇ ಕನ್ನಡಿಗರ ಒತ್ತಡ ಹೆಚ್ಚುತ್ತಿರುವಂತೆಯೇ, ಸಿದ್ದರಾಮಯ್ಯ ಅವರು 'ತಾನು ಕೂಡ ಎರಡು ನುಡಿ ಕಲಿಕೆಯ ಕಡೆಗೇ ಇರುವು'ದಾಗಿ ಹೇಳಿಕೆ ಕೊಟ್ಟಿದ್ದಾರೆ. ಆದಾಗ್ಯೂ ಈ ಕುರಿತಾಗಿ ಆಡಳಿತವು ಇದುವರೆಗೂ ಯಾವುದೇ ಸರಿಯಾದ ದಿಟ್ಟ ಹೆಜ್ಜೆಯೊಂದನ್ನು ಇಟ್ಟಿಲ್ಲ. ಈ ನಡುವೆ ಪಕ್ಕದ ಮಹಾರಾಶ್ಟ್ರ ನಾಡಿನಲ್ಲಿ ಮೂರ್ನುಡಿ ಕಲಿಕೆಯನ್ನು ತೊಲಗಿಸಿ ಎರಡು ನುಡಿ ಕಲಿಕೆಯನ್ನು ಜಾರಿಗೆ ತರಲಾಗಿದೆ ಅನ್ನುವುದನ್ನೂ ಗಮನಿಸಬೇಕಾಗಿದೆ.
ಹೆಚ್ಚಿದ ಕನ್ನಡ ಹೋರಾಡಿಗಳ ಎದಿರ್ಪು!
ನಾಳುಗಳೆದಂತೆ ಕನ್ನಡ ಹೋರಾಡಿಗಳು ತಮ್ಮ ಎದಿರ್ಪನ್ನು ಗಟ್ಟಿಯಾಗಿ ಹೇಳತೊಡಗಿದ್ದಾರೆ. ಇದೀಗ ಒಂದು ಗುಂಪಿನವರು ಕಲಿಕೆ ಮೇಲಾಳು ಮದು ಬಂಗಾರಪ್ಪ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಬೆದರಿಕೆಯನ್ನೂ ಒಡ್ಡಿದ್ದಾರೆ.

ಇದಕ್ಕೆ ಹೆದರಿದ ಕಲಿಕೆ ಮೇಲಾಳು ಕೂಡಲೇ ಏನಾದರೂ ಮಾಡಬೇಕು ಅನ್ನುವ ಇಕ್ಕಟ್ಟಿಗೆ ಸಿಲುಕಿದ್ದಾರೆ. ಹಾಗಾಗಿ ಕನ್ನಡಿಗರ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಜಾಣ್ಮೆಯೊಂದಿಗೆ ಒಂದು ಹೊಸ ಏರ್ಪಾಡನ್ನು ಮಂದಿಯ ಮುಂದಿಟ್ಟಿದ್ದಾರೆ. ಅದೇನೆಂದರೆ ಮೂರ್ನುಡಿ ಕಳಿಕೆಯು ಈಗ ಇರುವಂತೆಯೇ ಮುಂದುವರಿಯಲಿದೆ. ಹತ್ತನೇ (SSLC) ತರಗತಿಯವರೆಗೂ ಕಣ್ಣರಕೆಗಳೂ ಹಾಗೆಯೇ ನಡೆಯಲಿವೆ. ಹತ್ತನೇ (SSLC) ತರಗತಿಯಲ್ಲಿ ಪಡೆಯುವ ಅಂಕಗಳು ಒಟ್ಟಾರೆ ಅಂಕಗಳಿಗೆ ಸೇರಿಸುವುದಿಲ್ಲ, ಮಾರಾಗಿ ಹಿಂದಿಗೆ ಅಂಕಗಳ ಮಾರಾಗಿ ಹಂತವನ್ನು ನೀಡಲಾಗುತ್ತದೆ ಎಂದಿದ್ದಾರೆ.(X Post)
ಆದರೆ ಕನ್ನಡಿಗರ ಬೇಡಿಕೆಯನ್ನು ಇದು ಯಾವ ಬಗೆಯಲ್ಲೂ ಈಡೇರಿಸುವುದಿಲ್ಲ ಅನ್ನುವುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಕನ್ನಡಿಗರ ಬೇಡಿಕೆಯಿರುವುದು ಮೂರನೇ ನುಡಿ ಕಲಿಕೆಯೇ ಮಕ್ಕಳಿಗೆ ಹೊರೆಯಾಗಿದೆ. ಅದನ್ನು ತೊಲಗಿಸಬೇಕು ಅನ್ನುವುದು. ಆದರೆ ಆಡಳಿತವು ಅದನ್ನು ಕಡೆಗಣಿಸಿ ಕನ್ನಡಿಗರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡಿದೆ. ಅಂದರೆ ಹಿಂದಿಯನ್ನು ಮೂರನೇ ನುಡಿಯಾಗಿ ಕಳಿಯಲೇ ಬೇಕು, ಕಣ್ಣರಕೆಯನ್ನು ಬರೆಯಲೇ ಬೇಕು. ಒಂಬತ್ತನೇ ತರಗತಿಯವರೆಗೂ ಹಿಂದಿಯಲ್ಲಿ ತೇರ್ಗಡೆ ಹೊಂದಲೇ ಬೇಕು! ಹತ್ತನೇ ತರಗತಿಯಲ್ಲೂ ಕಣ್ಣರಕೆ ಬರೆಯಲೇ ಬೇಕು, ಅಂಕಗಳ ಮಾರಾಗಿ ಅದೇನೋ ಗ್ರೇಡ್ (ಹಂತ) ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಆಡಳಿತದ ಈ ಸಂಚಿಗೆ ಕನ್ನಡಿಗರು ಮಾರು ಹೋಗಬಾರದು.