ಕನ್ನಡಿಗರ ಹೆಮ್ಮೆಯ ಹಾಲು ಒಕ್ಕೂಟ (ಕೆ. ಎಂ. ಎಫ್.) ತನ್ನ ನಂದಿನಿ ಹಾಲನ್ನು ದೆಹಲಿ ಮಂದಿಗೂ ಉಣಿಸುವ ಹೊತ್ತು ಇದೀಗ ಬಂದಿದೆ. ಮುಂದಿನ ತಿಂಗಳ (ನಾಲ್ಮಳೆ ತಿಂಗಳು) ೧ ನೇ ನಾಳಿನಿಂದ ದೆಹಲಿಯಲ್ಲೂ ದೊರೆಯಲಿದೆ . ಹಾಲಿಗಾಗಿ ದೆಹಲಿ ಆಡಳಿತವೇ ಕೆ. ಎಂ. ಎಫ್.ಗೆ ಬೇಡಿಕೆ ಸಲ್ಲಿಸಿದುವುದಾಗಿ ತಿಳಿದು ಬಂದಿದೆ . ಒಂದೊಂದು ನಾಳೂ ಒಂದು ಲಕ್ಷ ಲೀಟರ ಹಾಲನ್ನು ಕಳಿಸಿ ಕೊಡಲು ಕೆ. ಎಂ. ಎಫ್. ಒಪ್ಪಿಕೊಂಡಿದೆ . ಹಾಗಾಗಿ ಇನ್ನು ಮುಂದೆ ದೆಹಲಿ ಮಂದಿ ಕನ್ನಡ ನೆಲದ ಹಾಲನ್ನು ಕುಡಿಯುವ ಹೊತ್ತು ಹತ್ತಿರವಾಗಿದೆ .
ಈ ಹಿಂದಿನ ಆಡಳಿತವು ಕೆ. ಎಂ. ಎಫ್. ಅನ್ನು ಗುಜರಾತಿನ ಅಮುಲ್ ಜೊತೆಗೆ ಕೂಡಿಸಿ ನಂದಿನಿಯನ್ನು ಇಲ್ಲವಾಗಿಸುವ ಕೆಲಸಕ್ಕೂ ಮುಂದಾಗಿತ್ತು ಅನ್ನುವುದನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಬಹುದು .