ಆಳ್ವಿಕೆಯ ಕಟ್ಟಡಗಳಿಗೆ ಮೈಸೂರು ಒಗರು ಹೊಳಪು!


೧೮ ಮುಮ್ಮಳೆ ೨೦೨೪, ೧೧:೧೪ ಇಳಿಹೊತ್ತು, 131 ಓದು

"#KSDL (ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ) ಸೇರುವೆಗೆ ಮರುಹುಟ್ಟು ನೀಡಿ ಆಗೆಯತ್ತ ಮುನ್ನಡೆಸಿದಂತೆಯೇ ಇದೀಗ ಕರ್ನಾಟಕ ಆಡಳಿತದ ಒಡೆತನದ ಮೈಸೂರು ಪೈಂಟ್ಸ್ & ವಾರ್ನಿಶ್ ಲಿಮಿಟೆಡ್ ಸೇರುವೆಗೂ ಹೊಸ ಹುಟ್ಟು ನೀಡಲಿದ್ದೇವೆ." ಎನ್ಬುದಾಗಿ ಕೈಗಾರಿಕೆ ಆಳುಗ ಎಮ್. ಬಿ .  ಪಾಟೀಲ ಅವರು ತಿಳಿಸಿದ್ದಾರೆ .  

ಇನ್ಮುಂದೆ ಆಡಳಿತದ ಎಲ್ಲಾ ಕಟ್ಟಡಗಳಿಗೆ ಮೈಸೂರು ಪೇಂಟ್ಸ್ ಒಗರು ಬಳಕೆಗೆ ತೀರ್ಮಾನಿಸಲಾಗಿದೆ ಎನ್ನಲಾಗಿದೆ. ಇದಲ್ಲದೇ ಇನ್ನೂ ಹೆಚ್ಚಿನ ಹೊಸತನ ನೀಡುವ  ಕೆಲಸಗಳ ಮೂಲಕ ೨೦೨೪-೨೫ ನೇ ಸಾಲಿನಲ್ಲಿ ೫೦೦ ಮಡಿ  ರೂಪಾಯಿಗಳ ಆಗೆ ಗಳಿಕೆಯ ಗುರಿ ಹೊಂದಲಾಗಿದೆಯಂತೆ. 

"ಈ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕಟ್ಟಿ ಬೆಳೆಸಿದ ಸೇರುವೆಗಳನ್ನು ಮತ್ತಶ್ಟು ಏಳಿಗೆಯತ್ತ ಕೊಂಡೊಯ್ಯಲಿದ್ದೇವೆ" ಎಂದು ಪಾಟೀಲ ಅವರು ತಿಳಿಸಿದ್ದಾರೆ . #MPVL

ಈಗಾಗಲೇ ಒಕ್ಕೂಟದ ಆಯ್ಕುಳಿಗಳ ಹೊತ್ತಿನಲ್ಲಿ ನಿಮ್ಮ ಉಗುರಿಗೆ ಬಳಿಯುವ ಗುರುತಿನ ಓಗರನ್ನು ಒದಗಿಸುತ್ತ ಇರುವುದು ನಮ್ಮ ನಾಡಿನದೇ ಆಗಿರುವ ಮಯ್ಸೂರು ಒಗರು ಸೇರುವೆ ಅನ್ನುವುದನ್ನು ಇಲ್ಲಿ ಗಮನಿಸಬಹುದು . 

ಹಂಚಿರಿ: