ಗೋವಾದಲ್ಲಿ ಅಂಚೆ ಕೊಂಬೆಯಲ್ಲಿ ಕೆಲಸ ಮಾಡಲು ಕೊಂಕಣಿ ತಿಳಿದಿರಲೇ ಬೇಕು ಎಂಬ ಕಡ್ಡಾಯ ಕಟ್ಟಳೆಯನ್ನು ಅಂಚೆ ಕೊಂಬೆಯು ಇತ್ತೀಚಿಗೆ ಹೊರಡಿಸಿದೆ. ಇದರಂತೆ, ಗೋವಾದಲ್ಲಿ ಅಂಚೆ ಕೊಂಬೆಯ ಕೆಲಸಕ್ಕೆ ಸೇರಲು ಕಡ್ಡಾಯವಾಗಿ ಕೊಂಕಣಿಯು ತಿಳಿದಿರಲೇ ಬೇಕಾಗಿದೆ. ಇದಕ್ಕಾಗಿ ಅಂಚೆ ಕೊಂಬೆಯು ಒಂದು ತಿದ್ದುಪಡಿಯನ್ನೂ ತಂದುಕೊಂಡಿದೆ.
ಆದರೆ ಇಲ್ಲಿ ಗಮನಿಸಬೇಕಾದುದು, ಇದೇ ಕಟ್ಟಳೆಯು ಕರ್ನಾಟಕಕ್ಕೆ ಅಳವಡಿಕೆಯಾಗುವುದಿಲ್ಲ! ಇಲ್ಲಿ ಕನ್ನಡ ಗೊತ್ತಿಲ್ಲದೆಯೇ ಕೆಲಸಕ್ಕೆ ಸೇರಿಕೊಳ್ಳಬಹುದು! ಗೋವಾ ನಾಡಿಗೆ ಅಳವಡಿಸಿರುವ ಈ ಕಟ್ಟಳೆಯನ್ನು ಯಾಕೆ ನಮ್ಮ ನಾಡಿಗು ಅಳವಡಿಸಬಾರದು? ಎಂಬುದು ಕನ್ನಡಿಗರ ಕೇಳ್ವಿಯಾಗಿದೆ.