ಇಂಡಿಯನ್ ಸೂಪರ್ ಲೀಗ್ (ISL) ಗೆ ನಂದಿನಿ ವೆಚ್ಚಿಗ


೦೪ ನಾಲ್ಮಳೆ ೨೦೨೪, ೦೮:೩೩ ಏರುಹೊತ್ತು, 684 ಓದು

ದೂರದ ಸ್ಕಾಟ್ಲೆಂಡ್ ಕ್ರಿಕೆಟ್ ತಂಡಕ್ಕೆ ವೆಚ್ಚಿಗರಾದ ಬಳಿಕ ಈಗ ಕನ್ನಡನಾಡಿನ ಹೆಮ್ಮೆಯ ಹಾಲು ಒಕ್ಕೂಟ ಕೆ.ಎಂ.ಎಫ್.  ಇದೀಗ ಇಂಡಿಯನ್ ಸೂಪರ್ ಲೀಗ್ (ISL)ಗೆ ವೆಚ್ಚಿಗ ಮೇಣ್ ಬೆಂಬಲಿಗರಾಗುವ ಒಪ್ಪಂದಕ್ಕೆ ಒಳಪಟ್ಟಿರುವುದಾಗಿ ತಿಳಿದು ಬಂದಿದೆ . 

ಗುಜರಾತ್ ನಾಡಿನ ಅಮುಲ್ ಸೇರುವೆ ಒಕ್ಕೂಟದೆಲ್ಲೆಡೆ ತುಂಬಾ ದೊಡ್ಡ ಮಟ್ಟದ ಹರದು ನಡೆಸುತ್ತಿದೆ. ಅದನ್ನು ಬಿಟ್ಟರೆ ನಮ್ಮ ನಂದಿನಿ ಇಂಡಿಯಾ ಒಕ್ಕೂಟದಲ್ಲಿ ಎರಡನೇ ಎಡೆಯಲ್ಲಿದೆ. ಅದು ಒಂದೆರಡು ಏಡುಗಳ ಹಿಂದೆ ಸರಿಯಾದ ಆಳ್ವಿಕೆ ಇಲ್ಲದೆ ಸೊರಗಿತ್ತು .  ಆಗ ಎಲ್ಲ ಕನ್ನಡಿಗರಿಗೂ ಈ ಸೇರುವೆಯ ಮುನ್ ಹೊತ್ತಿನ ಬಗ್ಗೆ ನಂಬದಿಕೆಗಳು ಉಂಟಾಗಿದ್ದವು .  ಆದರೆ ನಾಡಿನಲ್ಲಿ ಕಾಂಗ್ರೆಸ್ ಆಡಳಿತ ಬಂದ ಬಳಿಕ ಮೋಹನ್ ದಾಸ್ ಅವರ ಮುಂದಾಳ್ವಿಕೆಯಲ್ಲಿ ಕೆ.ಎಂ.ಎಫ್.  ಮೈಗೊಡವಿಕೊಂಡು ಮುನ್ನುಗ್ಗುತ್ತಿರುವುದು ಕಂಡು ಬರುತ್ತಿದೆ. ಕಳೆದ ಏಡು ದೂರದ ಸ್ಕಾಟ್ಲೆಂಡ್ ತಂಡಕ್ಕೆ ಬೆಂಬಲಿಗರಾಗಿ ನಂದಿನಿ ನೆಲತೆರಳೆಯಲ್ಲೆಲ್ಲ ಸುದ್ದಿ ಮಾಡಿತ್ತು. ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ISL ಗೂ ವೆಚ್ಚಿಗರಾಗಿ ಒಪ್ಪಂದ ಮಾಡಿಕೊಂಡಿದ್ದಾರೆ .  

ಕನ್ನಡಿಗರು ಕಟ್ಟಿ ಬೆಳೆಸಿರುವ   ಕೆ.ಎಂ.ಎಫ್. ಅನ್ನು ಅಮುಲ್ ಒಂದಿಗೆ ಸೇರಿಸಿ ಇದನ್ನು ಇಲ್ಲವಾಗಿಸುವ ಸಂಚನ್ನು ಕೆಲ ಏಡುಗಳ ಹಿಂದೆ ಗುಜರಾತಿ ನಾಡಿನ ಮಂದಿ ಮಾಡಿದ್ದನ್ನು ಕನ್ನಡಿಗರು ಕಟುವಾಗಿ ಎದುರಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು . 

ಹಂಚಿರಿ: