ಕನ್ನಡಿಗರ ಹೆಮ್ಮೆಯ ನಂದಿನಿ ಹೆಸರಿನ ಹಾಲು, ಬೆಣ್ಣೆ, ತುಪ್ಪ ಮೊದಲಾದ ಪೋರುಳುಗಳು ಕರ್ನಾಟಕದ ತುಂಬೆಲ್ಲ ಮನೆ ಮಾತಾಗಿರುವುದು ತಿಳಿದಿರುವ ಕುರಿಪೇ ಆಗಿದೆ. ಹಾಗೆಯೇ ಅದು ಇತ್ತೀಚಿನ ಏಡುಗಳಲ್ಲಿ ಕರ್ನಾಟಕ ಗಡಿಯನ್ನು ದಾಟಿ ಒಕ್ಕೂಟದ ಹೊರನಾಡುಗಳಿಗೂ ಹೋಗಿ ಅಲ್ಲಿಯೂ ಒಳ್ಳೆಯ ಅನಿಸಿಕೆಯನ್ನು ಪಡೆದಿದೆ. ಮುಂಬಯಿ, ದೆಹಲಿ ಮೊದಲಾದ ಕಡೆ ನಂದಿನಿ ಹುಟ್ಟುವಳಿಗಳಿಗೆ ಒಳ್ಳೆಯ ಬೇಡಿಕೆ ಇದೆ.
ಹೊರನಾಡಿಗು ಹೋರಾಟ ನಂದಿನಿ.
ಇಂಡಿಯಾ ಒಕ್ಕೂಟದೊಳಗೆ ಗುಜರಾತಿನ ಅಮೂಲ್ ಬಿಟ್ಟರೆ ಕನ್ನಡಿಗರ ನಂದಿನಿಯೇ ತುಂಬಾ ದೊಡ್ಡ ಹಾಲು ಹುಟ್ಟುವಳಿಗಳ ಕೂಡಣಕೂಟವಾಗಿದೆ. ಇದೀಗ ನಂದಿನಿ ತನ್ನ ಮಾರಾಟ ದಾರಿಯನ್ನು ತೆರಹಿನ ಸವುದಿ ಅರೇಬಿಯಾಕ್ಕು ಹಬ್ಬಿಸಿಕೊಂಡಿದೆ. ಇದೀಗ ನಂದಿನಿ ಬೆಣ್ಣೆ, ತುಪ್ಪ ಮೊದಲಾದ ಹಲವು ಹುಟ್ಟುವಳಿಗಳು ದುಬಯ್ ಮೊದಲಾಡೆದೆ ದೊರೆಯುತ್ತಿವೆ ಎಂದು ತಿಳಿದು ಬಂದಿದೆ. ಮತ್ತು ಅಲ್ಲಿ ನೆಲೆಸಿರುವ ಕನ್ನಡಿಗರೂ ಹುಡುಕಿಕೊಂಡು ಹೋಗಿ ಈ ಪುರುಳುಗಳನ್ನುಕೊಳ್ಳುತ್ತಿದ್ದಾರೆ.
ಅಂತೂ ಸೌದಿ ಅರೇಬಿಯಾಕ್ಕೆ ನಮ್ಮ ನಂದಿನಿ ಬಂತು. ನಂದಿನಿ ಅಂಗಡಿ ಬಂದ್ರೆ ಇನ್ನೂ ಸಂತೋಷ
— Nuthan || ನೂತನ (@KannadigaSpeaks) June 16, 2025
ಈಗ ದುಬೈನಲ್ಲಿ ಮಾತ್ರ ಇರೋದು @kmfnandinimilk@siddaramaiah@DKSureshINC#ನಂದಿನಿ #nandini
ನಮ್ಮ ನಂದಿನಿ ನಮ್ಮ ಹೆಮ್ಮೆ pic.twitter.com/lBAxGnwCUy