ಅಯ್ದನೆ ಏಡಿನ ಕನ್ನಡ ನಾಳುತೋರುಗೆ ಬಿಡುಗಡೆ


೧೯ ಇಚ್ಚಳಿ ೨೦೨೫, ೧೦:೫೦ ಏರುಹೊತ್ತು, 1 ಓದು

ಪಿಸುಮಾತು ಅಚ್ಚುಮನೆಯವರು ಹೊರ ತರುತ್ತಿರುವ ಅಪ್ಪಟ ಕನ್ನಡದ ನಾಳುತೋರುಗೆಯ ಅಯ್ದನೇ ಅಚ್ಚು (೨೦೨೬ನೇ ಏಡಿನದು) ಇದೀಗ ಮಾರುಕಟ್ಟೆಗೆ ಬರುತ್ತಿದೆ. ೨೦೨೨ ರಲ್ಲಿ ತೊಡಗಿದ ಕನ್ನಡ ಅಂಕಿ, ತಿಂಗಳು ಮತ್ತು ನಾಳುಗಳ ಹೆಸರುಗಳನ್ನುಳ್ಳ ಕನ್ನಡದ್ದೇ ನಾಳುತೋರುಗೆಯು ಇದುವರೆಗೂ ಚಾಚೂ ತಪ್ಪದೆ ಮುನ್ನಡೆದುಕೊಂಡು ಬಂದಿರುವುದು ನಲಿವಿನ ಸುದ್ದಿಯಾಗಿದೆ. 

ಇದರಲ್ಲಿ ಕನ್ನಡದ ಹಿರಿಯ ನಲ್ಬರಹಗರ ಕುರಿತಾಗಿ ಪುಟ್ಟ ಕುರಿಪುಗಳು ಅವರವರ ಹುಟ್ಟುನಾಳಿನ ಕೂಡಿ ಇದ್ದರೆ, ಇನ್ನೂ ಹೆಚ್ಚು ಕನ್ನಡಕ್ಕೆ ದುಡಿದ ಹಲವಾರು ಮಂದಿಯ ಬಗೆಗೂ ಕುರಿಪುಗಳು ಇವೆ. ಈ ಬಾರಿ ಹೊಸದಾಗಿ ಕರ್ನಾಟಕದಲ್ಲಿ ನೇಸರನು ಬೆಳಿಗ್ಗೆ ಹುಟ್ಟುವ ಹೊತ್ತನ್ನು ಸೇರಿಸಲಾಗಿದೆ. ತಿಂಗಳುಗಳ ಹೆಸರು ನಾಲ್ಚಳಿ, ಅಯ್ಚಳಿ.. ಎಂಬುದಾಗಿದ್ದರೆ, ನಾಳುಗಳ ಹೆಸರುಗಳು ನೇಸರಣಾಳು, ತಿಂಗಳನಾಳು ಎಂಬುದಾಗಿ ಇವೆ. ಈ ಹೊಸ ಒರೆಗಳಲ್ಲಿ ಹೆಚ್ಚಿನವನ್ನು ಡಿ.ಎನ್. ಶಂಕರಬಟ ನೀಡಿರುತ್ತಾರೆ. ಹಾಗೆಯೇ ಈ ಬಾರಿ ಕನ್ನಡ ನಾಡಿನ ನೆಲದಲ್ಲಿ ಕಂಡು ಬರುವ ಮೇಲೊತ್ತಿನ ನಡೆಯುಸಿರಿಗಳ ತಿಟ್ಟಗಳನ್ನು ಕೂಡ ಬಳಸಿಕೊಳ್ಳಲಾಗಿದೆ.

ಈ ಅಪ್ಪಟ ಕನ್ನಡದ ನಾಳುತೋರುಗೆಯನ್ನು ಕೊಳ್ಳಲು ಇಲ್ಲಿ ಹೋಗಿರಿ

ಹಂಚಿರಿ: