ಕರ್ನಾಟಕದ ಹಿರಿಯ ಕ್ರಿಕೆಟ್ ಆಟಗಾರ ದೊಡ್ಡ ಗಣೇಶ್ ಅವರು ಇದೀಗ ಕೀನ್ಯಾ ನಾಡಿನ ಗಂಡಸರ ಕ್ರಿಕೆಟ್ ತಂಡಕ್ಕೆ ತರಬೇತುಗರಾಗಿ (coach) ಆಯ್ಕೆಯಾಗಿರುವ ಸುದ್ದಿ ಬಂದಿದೆ. ಗಣೇಶ್ ಅವರು ಕರ್ನಾಟಕ ತಂಡದ ರಣಜಿ ಆಟಗಾರರಾಗಿ ಹಲವಾರು ಏಡುಗಳವರೆಗೆ ಆಟವಾಡಿ ನಾಡಿಗೆ ಹೆಚ್ಚಿನ ಒಲವಿಯನ್ನು ಕೊಟ್ಟವರು. ಆ ಬಳಿಕ ಭಾರತ ಒಕ್ಕೂಟದ ಕ್ರಿಕೆಟ್ ತಂಡಕ್ಕೂ ಆಯ್ಕೆಯಾಗಿ ಅಲ್ಲಿಯೂ ಹಲವಾರು ಪಂದ್ಯಗಳಲ್ಲಿ ಪಾಲ್ಗೊಂಡು ಒಳ್ಳೆಯ ಆಟವನ್ನು ಆಡುವ ಮೂಲಕ ಒಕ್ಕೂಟ ಕ್ರಿಕೆಟ್ ತಂಡಕ್ಕೆ ಒತ್ತಾಸೆಯಾಗಿ ನಿಂತಿದ್ದರು.
ತಮ್ಮ ಕ್ರಿಕೆಟ್ ಬದುಕು ಕೊನೆಗೊಂಡರು ಕೂಡ ಮನೆಯಲ್ಲಿ ಸುಮ್ಮನೆ ಕೂರದೆ ಕ್ರಿಕೆಟ್ ಬಗೆಗಿನ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಇವರ ಹೆಗ್ಗಳಿಕೆಯನ್ನು ಗುರುತಿಸಿ ದೂರದ ಕೀನ್ಯಾ ನಾಡಿನವರು ತಮ್ಮ ನಾಡಿನ ಗಂಡಸರ ಕ್ರಿಕೆಟ್ ತಂಡಕ್ಕೆ ತರಬೇತುಗರಾಗಿ
ದೊಡ್ಡ ಗಣೇಶ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಪ್ಪಟ ಕನ್ನಡಿಗರಾದ ದೊಡ್ಡ ಗಣೇಶ ಅವರಿಗೆ ಈ ಬಗೆಯ ಒಂದು ಮದಿಪು ದೊರೆತಿರುವುದು ಕನ್ನಡಿಗರು ಕೂಡ ಹೆಮ್ಮೆಪಡವ ಸುದ್ದಿಯಾಗಿದೆ.