ಯೂಟ್ಯೂಬ್ ನೋಡುಗರಿಗೆ ಡಾ. ಬ್ರೋ ಎಂಬ ಹೆಸರಲ್ಲಿ ಒಯ್ಯುಗೆ ನಡೆಸುತ್ತಿರುವ ಗಗನ್ ಶ್ರೀನಿವಾಸ್ ಎಂಬ ಹುಡುಗ ಎಲ್ಲರಿಗೂ ತಿಳಿದಿರುವಾತ. ಇವರು ಬೇರೆ ಬೇರೆ ನಾಡುಗಳನ್ನು ಸುತ್ತಾಡುತ್ತಾ ಅಲ್ಲಿನ ಮಂದಿಯ ಬದುಕನ್ನು ನಮಗೆ ತೋರಿಸುತ್ತಿದ್ದಾರೆ. ಇವರು ಸುತ್ತಾಡದ ನಾಡೆ ಇಲ್ಲವೇನೋ ಅನ್ನಬೇಕು. ಹಾಗೆಯೇ ಎಲ್ಲವೂ ಸರಿ ಇರುವ ನಾಡುಗಳನ್ನಅಶ್ಟೆ ಅಲ್ಲದೆ ನಾಡಿನ ಒಳಗೆ ಆಳ್ಮೆಗಾರಿಕೆ ಸರಿ ಇರದ ನಾಡುಗಳಿಗೂ ಇವರು ನೋಡುಗೆ ಕೊಟ್ಟಿದಾರೆ. ತಾಲಿಬಾನಿಗಳು ಆಡಳಿತದಲ್ಲಿ ಇರುವ ಅಫ್ಘಾನಿಸ್ತಾನಕ್ಕೂ ನೋಡದೆ ಕೊಟ್ಟು ಅಲ್ಲಿನ ಆಗುಹೋಗುಗಳನ್ನು ತೋರಿಸಿಕೊಟ್ಟಿದ್ದರು.
ಗಗನ್ ಇತ್ತೀಚೆಗೆ ನೈಜೀರಿಯಾ ನಾಡಿಗೂ ನೋಡುಗೆ ಕೊಟ್ಟಿದಾರೆ. ಅಲ್ಲಿನ ಮಾಕೊಕೊ ಎಂಬ ಕೊಳಚೆ ನೀರಿನ ಮೇಲೆ ತೇಲುವ ಊರಿಗೆ ಹೋಗಿದ್ದರು. ಅಲ್ಲಿ ಸುತ್ತಾಡುತ್ತಾ ಅಲ್ಲಿನ ಮಕ್ಕಳಿಗಾಗಿ ನಡೆಸಲ್ಪಡುತ್ತಿರುವ ಒಂದು ಕಲಿಕೆ ಮನೆಗೆ ಕೂಡ ಹೋಗಿದ್ದಾರೆ. ಅಲ್ಲಿನ ಮಕ್ಕಳಿಗೆ ತಮ್ಮ ತಾಯಿನುಡಿ ಆದ ಕನ್ನಡವನ್ನು ಗೊತ್ತು ಮಾಡುತ್ತಾ ಗಗನ್ ಅವರು ಇಂಡಿಯಾದಲ್ಲಿ ಒಂದು ಹೆಚ್ಚು ತಿಳಿದಿರುವ ನುಡಿ ಇದೆ. ನಾನೀಗ ಇಂಡಿಯಾದ ರಾಷ್ಟ್ರನುಡಿಯನ್ನು ನಿಮಗೆ ತಿಳಿಸುತ್ತೇನೆ ಎಂದು ಹೇಳಿ ಅಲ್ಲಿನ ಕಪ್ಪು ಹಲಗೆಯ ಮೇಲೆ ಕನ್ನಡದ ಅ ಆ ಇ ಈ ಎಂಬ ಕನ್ನಡದ ಬರಿಗೆಗಳನ್ನು ಬರೆದು ಅಲ್ಲಿದ್ದ ಮಕ್ಕಳಿಗೆ ಹೇಳಿ ಆ ಮಕ್ಕಳಿಂದಲೂ ಕನ್ನಡದ ಅ ಆ ಇ ಈ ಅನ್ನು ಹೇಳುತ್ತಾರೆ.
ಗಗನ್ ಅವರ ಈ ಒಯ್ಯುಗೆಯು ಕನ್ನಡಿಗರಿಂದ ತುಂಬಾ ಹೊಗಳಿಕೆಗೆ ತಕ್ಕದಾಗಿದ್ದು ಹೊಗಳಿಕೆಯ ನೆರೆಯೇ ಹರಿದು ಬರುತ್ತಿದೆ. ಡಾ. ಬ್ರೋ ಅವರ ಈ ಕನ್ನಡ ಒಲವಿಗೆ ನೂರಾರು ಕನ್ನಡಿಗರು ಮೆಚ್ಚುಗೆ ತೋರುತ್ತಿದ್ದಾರೆ.