ಕನ್ನಡದ ಹಿರಿಯ ನಲ್ಬರಹಗಿ ಬಾನು ಮುಶ್ತಾಕ್ ರವರಿಗೆ ನೆಲತರಳೆಯ ಮೇಲ್ಮಟ್ಟದ ಮನ್ನಣೆಯಾದ ಬೂಕರ್ ಗರಿಮೆಯು ದೊರೆತಿದೆ. ಇವರ 'ಎದೆಯ ಹಣತೆ' ಎಂಬ ಹೆಸರಿನ ಪೇಳ್ವಿಸೇರಿಕೆಗೆ ಈ ಮನ್ನಣೆ ದೊರೆತಿದೆ. ಈ ಪೇಳ್ವಿಸೇರಿಕೆಯನ್ನು ಮತ್ತೊಬ್ಬ ಕನ್ನಡತಿ ದೀಪಾ ಬಸ್ತಿಯವರು ಆಂಗ್ಲಕ್ಕೆ ನುಡಿಮಾರುಗೊಳಿಸಿದ್ದರು.
ಬೂಕರ್ ಗರಿಮೆಯೊಂದು ಕನ್ನಡಕ್ಕೆ ದೊರೆತಿರುವುದು ಇದೆ ಮೊದಲು. ಹಾಗಾಗಿ ಕನ್ನಡಿಗರೆಲ್ಲರೂ ಈ ಬಗ್ಗೆ ಬಾನು ಅವರನ್ನು ಹಾರಯ್ಸಿದ್ದಾರೆ. ಹಾಸನ ಕಂಪನದಲ್ಲಿ ೧೯೪೮ ರಲ್ಲಿ ಹುಟ್ಟಿದ ಬಾನು ಮೊದಲಿನಿಂದಲೂ ಬರವಣಿಗೆಯಲ್ಲಿ ತೊಡಗಿಸಿಕೊಂಡವರು. ಇವರು ಓದಿರುವುದು ಸಿಹಿಮೊಗೆಯಲ್ಲಿ ಹಾಗೆಯೇ ಕೆಲಸದಿಂದ ಕಟ್ಟಳೆಯಾರಿಗರಾಗಿದ್ದರೂ ಇನ್ನೊಂದೆಡೆ ಹೆಂಗಳೆಯರಿಗಾಗಿ ಹೋರಾಡುಗಿಯೂ ಅಹುದು. ಅಂದಿನ ಇವರ ನೆಮ್ಮುಪಾಡಿನ ಎದಿರಾಗಿ ಹೊರಟ ಬಾನು ಕಟ್ಟುಪಾಡುಗಳನ್ನು ಮುರಿದು ಮೇಲ್ಕಲಿಕೆಯನ್ನು ಮುಗಿಸಿದುದಲ್ಲದೇ, ಮೆಚ್ಚಿ ಮದುವೆಯನ್ನೂ ಆದರು.
ಬಳಿಕ ಬರವಣಿಗೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಹೆಜ್ಜೆ ಮೂಡಿದ ಹಾದಿ, ಬೆಂಕಿ ಮಳೆ, ಎದೆಯ ಹಣತೆ, ಸಪೀರಾ ಮತ್ತು ಬಡವರ ಮಗಳು ಹೆಣ್ಣಲ್ಲ ಎಂಬ ಪೇಳ್ವಿಸೇರಿಕೆಗಳನ್ನು ಬರೆದರು. ಇವುಗಳಲ್ಲದೆ 'ಕುಬ್ರ' ಎಂಬ ಹಿರಿಪೇಳ್ವಿ, 'ಇಬ್ಬನಿಯ ಕಾವು' ಎಂಬ ಬರಹಗಳ ಸೇರಿಕೆ, 'ಒದ್ದೆ ಕಣ್ಣಿನ ಬಾಗಿನ' ಎಂಬ ಹಾಡುಸೇರಿಕೆ ಮತ್ತು 'ಕವುಟುಂಬಿಕ ದವುರ್ಜನ್ಯ ಕಾಯಿದೆ' ಎಂಬ ಕಟ್ಟಳೆಯರಿವಿನ ಹೊತ್ತಗೆಯನ್ನೂ ಹೊರ ತಂದಿದ್ದಾರೆ. ಇಂತಹ ಒಬ್ಬ ಕನ್ನಡದ ಹೆಣ್ಣು ಮಗಳು ಕನ್ನಡಕ್ಕೆ ಬೂಕರ್ ಗರಿಮೆಯನ್ನು ತಂದು ಕೊಟ್ಟಿರುವುದು ನಾವೆಲ್ಲ ಹೆಮ್ಮೆ ಪಾಡಬೇಕಾದ ಕುರಿಪಾಗಿದೆ.