ಇತ್ತೀಚಿಗೆ ಕನ್ನಡದಲ್ಲಿ ಹೊರ ಬಂದಿರುವ 'ಕುರ್ದಿಶ್ ನಾಡು-ನುಡಿ ಹೋರಾಡಿಯ ನೆನಪುಗಳು' ಎಂಬ ಹೊತ್ತಗೆಗೆ ತೆರವಿನ ಕುರ್ದಿಗಳು ಕೂಡ ನಲಿವು ತೋರ್ಪಡಿಸುತ್ತಿದ್ದಾರೆ. ಈ ಹೊತ್ತಗೆಯು ಕುರ್ದಿಶ್ ಹೋರಾಡಿಗ 'ಅಪೆ ಮೂಸಾ ಆಂಟೆರ್' ರವರ ಬದುಕು ಬರಹ 'ಹತಿರಾಲರಿಮ್ (Hatiralarim)' ಎಂಬ ಹೊತ್ತಗೆಯ ಕನ್ನಡ ನುಡಿಮಾರುಗೆಯಾಗಿದೆ. ಕುರ್ದಿಗಳ ನಾಡು-ನುಡಿ ಹೋರಾಟದ ಬಗ್ಗೆ ಇದು ಇಡಿಯಾದ ತಿಳಿವನ್ನು ಕೊಡುತ್ತದೆ.
ತಮ್ಮ ಹೋರಾಡಿಯ ಬಗೆಗಿನ ಹೊತ್ತಗೆಯೊಂದು ತೆರವಿನ ಕನ್ನಡ ನಾಡಿನ ಮಂದಿಗೆ ತಲುಪಿರುವುದಕ್ಕೆ ಕೂರ್ದಿಗಳೂ ಇಗ್ ನಲಿವುಗೊಂಡು ಕೂಡಣಕೂಟ ತಾವುಗಳಲ್ಲಿ ಅದನ್ನು ಹಂಚಿಕೊಳ್ಳುತ್ತಿದ್ದಾರೆ. ರೆಡಿಟ್ ತಾವಿನಲ್ಲಿ 'From Kurdistan to Karnataka: Musa Anter’s book in Kannada' ಎಂಬ ತಲೆಬರಹದಲ್ಲಿ ಒಬ್ಬರು ಕುರ್ದಿಶ್ ತಮ್ಮ ನಲಿವು ಹಂಚಿಕೊಂಡಿರುವುದನ್ನು ಇಲ್ಲಿ ಕಾಣಬಹುದಾಗಿದೆ. ೧,೫೦೦ ಏಡುಗಳಿಗೂ ಹೆಚ್ಚಿನ ಹಿನ್ನಡಾವಳಿ ಹೊಂದಿರುವ ಕನ್ನಡವನ್ನು ಸುಮಾರು ೪೫ ಮಡಿ ಮಂದಿ ಮಾತನಾಡುತ್ತಾರೆ ಎಂದೂ ಬರೆಯಲಾಗಿದೆ. ಹಾಗೆಯೇ ಅದರ ಜೊತೆಗೆ ಅವರು ಆ ಹೊತ್ತಗೆಯು ದೊರೆಯುವ 'ಹರಿವು ಬುಕ್ಸ್'ನ ಕೊಂಡಿಯನ್ನೂ ಸೇರಿಸಿದ್ದಾರೆ.