೯೦೦ ಏಡುಗಳಶ್ಟು ಹಳೆಯ ಚಾಲುಕ್ಯರ ಕಲ್ಬರಹವು ಕಡೆಗಣನೆ ಪಾಡಿನಲ್ಲಿ ತೆಲಂಗಾಣದ ಗಂಗಾಪುರಂನಲ್ಲಿ ಕಂಡು ಬಂದಿದೆ


೨೩ ನಾಲ್ಮಳೆ ೨೦೨೪, ೦೮:೫೮ ಏರುಹೊತ್ತು, 1024 ಓದು

೧೨ನೇ ನೂರೇಡಿನ ಕನ್ನಡಿಗರ ಅರಸು ಮನೆತನವಾದ ಕಲ್ಯಾಣಿ ಚಾಲುಕ್ಯರ ಕಲ್ಬರಹವೊಂದು ಪಕ್ಕದ ತೆಲಂಗಾಣ ನಾಡಿನ ಮಹಬೂಬ್‌ನಗರದಲ್ಲಿ ಗಮನ ಸೆಳೆಯುತ್ತದೆ. ಇ ಶಿವನಾಗಿ ರೆಡ್ಡಿ, ಹಳಮೆಯರಿಗ ತಿಳಿಸಿದ್ದಾರೆ, 

ಮಹಬೂಬನಗರ ಕಂಪಣದ ಜಡ್ಚೆರ್ಲಾ ಹೋಬಳಿಯಲ್ಲಿರುವ ಗುಡಿಯ ಪಟ್ಟಣವಾದ ಗಂಗಾಪುರಂನಲ್ಲಿರುವ ಕಲ್ಯಾಣ ಚಾಲುಕ್ಯ ಅರಸು ಮನೆತನದ ೯೦೦ ಏಡುಗಳಶ್ಟು ಹಳೆಯದಾದ ಕನ್ನಡ ಕಲ್ಬರಹವನ್ನು ಸರಿನೋಡಿದ್ದಾರೆ. ೯೦೦ ಏಡುಗಳಶ್ಟು ಹಳೆಯದಾದ ಈ ಕನ್ನಡ ಕಲ್ಬರಹವು ತುಂಬಾ ಹಳತಾದ ಮತ್ತು ಕಡೆಗಣನೆಗೊಂಡ ಪಾಡಿನಲ್ಲಿ ಕಂಡು ಬಂದಿದೆ. ಹಳಮೆಯರಿಗ ಮತ್ತು ಪ್ಲೀಚ್ ಇಂಡಿಯಾ ಫೌಂಡೇಶನ್‌ನ ಸಿಇಒ ಇ.ಶಿವನಾಗಿ ರೆಡ್ಡಿ ಅವರು ಗಂಗಾಪುರಂನ ಹೊರವಲಯದಲ್ಲಿರುವ ಚೌಡಮ್ಮ ಗುಡಿಯ ಸುತ್ತಮುತ್ತಲಿನ ಸುತ್ತಾಣಗಳಿಗೆ ‘ನಡೆಪಾಡುಗಳನ್ನು ಉಳಿಸಿ’ ಎಂಬ ಸಾರುವಿಕೆ ಪಾಲಾಗಿ ಕಾಣು ನೀಡಿದಾಗ ಇದನ್ನು ಗಮನಿಸಿದ್ದೇವೆ ಎಂದು ಹೇಳಿದರು. 

ಹತ್ತಿರದ ಕೆರೆಯ ಏರಿಯ ಮೇಲೆ ಕಲ್ಬರಹವು ಕಾಳಜಿಯಿಲ್ಲದೆ ಬಿದ್ದಿತ್ತು ಎಂದು ಅವರು ಹೇಳಿದರು. ಡಾ. ರೆಡ್ಡಿ ಕಲ್ಬರಹವನ್ನು ಎಚ್ಚರಿಕೆಯಿಂದ ಓದಿದ ಬಳಿಕ ಮೊಮ್ಮಳೆ ೮, ೧೧೩೪ (ಕಡಲನಾಳು) ರಂದು ಕಲ್ಯಾಣ ಚಾಲುಕ್ಯ ಹಿರಿಯರಸು 'ಬೂಲೋಕಮಲ್ಲ' ಸೋಮೇಶ್ವರ-೩ ರ ಮಗ ತೈಲಪ-೩ ರ ತೆರಿಗೆ ಆಳ್ಮೆಗಾರರು ಬಿಡುಗಡೆ ಮಾಡಿದರು ಎಂದು ತಿಳಿಯಪಡಿಸಿದರು, ಇದು ಆಗೆಯ ಬಗೆಹರಿಕೆಯನ್ನು ಅಚ್ಚಿಸುತ್ತದೆ. ವಡ್ಡರವುಳ ಮತ್ತು ಹೆಜ್ಜುಂಕ ಎಂಬ ಸುಂಕ ತೆರಿಗೆಗಳ ಮೂಲಕ ಸೋಮನಾಥ ಕಡವರ ಆರದ ಸೊಡರು ಮತ್ತು ಹೊಗೆಕಲ್ಲಿಗೆ ಇದನ್ನು ಬಳಸಲಾಗಿದೆ. ಹಳಮೆಯರಿಮೆ ಕೊಂಬೆಯು ಕಲ್ಬರಹವನ್ನು ತುಂಬಾ ಹಿಂದೆಯೇ ನಕಲು ಮಾಡಿ ಅಚ್ಚಿಸಿದ್ದರು.

ಡಾ. ಶಿವನಾಗಿ ರೆಡ್ಡಿ ಅವರು ಚೌಡಮ್ಮ ಗುಡಿಯ ಕಿರುತಂಡದ ಉರಳಿಗರಿಗೆ ಕಲ್ಬರಹದ ಹಿನ್ನಡವಳಿಯ ಮೇಲ್ಮೆಯನ್ನು ಮತ್ತು ಮುಂದಿನವರಿಗೆ ಅದನ್ನು ಕಾಪಿಡಬೇಕಾದ ಈ ಕೂಡಲೆಯ ಬೇಕಿರುವಿಕೆಯ ಬಗ್ಗೆ ಎಚ್ಚರಿಕೆ ಮೂಡಿಸಿದರು. ಚೌಡಮ್ಮ ಗುಡಿಯ ಬೇಲಿಯೊಳಕ್ಕೆ ಎಡೆಮಾರಿಸಿ ಒಕ್ಕಣೆಯೊಂದಿಗೆ ಕಲ್ಲು ಕುಡಿಸಲು ಗುಡಿಯ ಕಿರುಗೂಟದ ಉರಳಿಗರಾದ ಕೆ.ಮಲ್ಲಿಕಾರ್ಜುನ್, ಗಿರಿಪ್ರಸಾದ್, ಚೆನ್ನಯ್ಯ, ಸೀನು, ಶಂಕರ್, ಶ್ರೀನಿವಾಸ್, ಸತ್ತೆಯ್ಯ ಎಲ್ಲರೂ ಒಡಂಬಡುವವರಾಗಿ ತಿಳಿಸಿದ್ದಾರೆ. ಆಗುಹದಲ್ಲಿ ಪೆರ್ಬಿಡುವಿಗ ಬೆಣಿಗ ಗಂಗಾಪುರಂ ಕೇಶವ ಪ್ರಸಾದ್ ಪಾಲ್ಗೊಂಡಿದ್ದರು.


ಹಂಚಿರಿ: